ಮೈಸೂರು ಸಾಮ್ರಾಜ್ಯ: ಚಿಕ್ಕದೇವರಾಜ ಒಡೆಯರ್ ರವರ (ಕ್ರಿ.ಶ. 1673-1704), ಅತ್ಯಂತ ಅಪರೂಪದ ತಾಮ್ರದ ನಾಣ್ಯ . ಮುಂಭಾಗದಲ್ಲಿ: ಬಲಕ್ಕೆ ಕುಳಿತಿರುವ ನಂದಿ ,ಹಿಂಭಾಗದಲ್ಲಿ: ಕನ್ನಡ ಲಿಪಿಯಲ್ಲಿ,- "ಚಿಕ್ಕ ದೇವರಾಯ "( ಬಹುಶಃ ದೋಷಪೂರಿತ ಅಚ್ಹೊತ್ತಿನಿಂದ) ಹೆಸರು ಪುನರಾವರ್ತಿತವಾಗಿರಬಹುದು ಚಿಕ್ಕದೇವರಾಜ ಒಡೆಯರು (ಕ್ರಿ.ಶ. 1672-1704ರವರೆಗೆ ಹಿಂದಿನ ಮೈಸೂರು ಸಂಸ್ಥಾನವನ್ನಾಳಿದ ಪ್ರಖ್ಯಾತ ಹಾಗೂ ಅತ್ಯಂತ ಸಮರ್ಥ ರಾಜರಲ್ಲಿ ಒಬ್ಬರು .ಇವರ ಕಾಲ ಮೈಸೂರು ಇತಿಹಾಸದಲ್ಲಿಯೇ ಸುವರ್ಣಯುಗವೆಂದು ಕರೆಯಲಾಗಿತ್ತು. ದಕ್ಷ ಆಡಳಿತದಿಂದ ಅಪಾರ ಸಂಪತ್ತನ್ನು ಗಳಿಸಿದ ಇವರಿಗೆ ‘ನವಕೋಟಿ ನಾರಾಯಣ’, ‘ರಾಜಾಜಗದೇವ’ ಎಂಬ ಬಿರುದುಗಳೂ ಕೂಡಾ ಇತ್ತು. ದಕ್ಷ ದೊರೆಯಾದಂತೆಯೇ ಸಾಹಿತ್ಯ ಸಂಗೀತ ವಿಸ್ತಾರಂ ಎಂಬ ಕೀರ್ತಿಯನ್ನು ಕೂಡ ಈತ ಪಡೆದುಕೊಂಡನು. ಅಪ್ರತಿಮ ಕವಿಯಾಗಿ ಹೆಸರು ಪಡೆದ ಈತ ‘ಚಿಕ್ಕದೇವರಾಜ ಬಿನ್ನಪ’, ‘ಗೀತ ಗೋಪಾಲ’, ‘ಭಾರತ ಭಾಗವತ’ ಇವೇ ಮೊದಲಾದ ವಿಶಿಷ್ಠಾದ್ವೈತ ಧರ್ಮ ತತ್ವವನ್ನು ಸಾರುವ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾನೆ.ಚಿಕ್ಕದೇವರಾಜ ಒಡೆಯರು ಉತ್ತಮ ಆಡಳಿತಗಾರರಾಗಿದ್ದರು. ಅವರು ಆಡಳಿತವನ್ನು ವ್ಯವಸ್ಥೆಗೊಳಿಸಿ,, ಅಠಾರ ಕಛೇರಿಯನ್ನು ಸ್ಥಾಪಿಸಿದರು. ಇದರಲ್ಲಿ 18 ಆಡಳಿತ ಶಾಖೆಗಳಿದ್ದವು. ಪತ್ರ ವ್ಯವಹಾರಕ್ಕೆ ಸುವ್ಯವಸ್ಥೆ ಏರ್ಪಡಿಸಿ “ಅಂಚೆ” ಇಲಾಖೆಯನ್ನು ಆರಂಭಿಸಿದರು.ತೆರಿಗೆಗಳನ್ನು ಕಟ್ಟುನಿಟ್ಟಾಗಿ ಸಂಗ್ರಹಿಸಿದರು.ಇವರು ಆಡಳಿತದಲ್ಲಿ ಮಿತವ್ಯಯ ಸಾಧಿಸಿ ಖಜಾನೆಯಲ್ಲಿ ಧನಕನಕಗಳನ್ನು ಸಂಗ್ರಹಿಸಿದ್ದರು. ಚಿಕ್ಕದೇವರಾಜನಾಲೆ ಮತ್ತು ದೊಡ್ಡದೇವರಾಜನಾಲೆ ಎಂಬ ಎರಡು ಕಾಲುವೆಗಳನ್ನು ನಿರ್ಮಿಸಿ ನೀರಾವರಿ ಸೌಲಭ್ಯವನ್ನು ವಿಸ್ತರಿಸಿದರು. ಚಿಕ್ಕದೇವರಾಜರು 1687 ರಲ್ಲಿ ಮೊಘಲ್ ದೊರೆ ಔರಂಗಜೇಬನಿಂದ ಮೂರು ಲಕ್ಷ ರೂಪಾಯಿಗಳಿಗೆ ಬೆಂಗಳೂರನ್ನು ಕೊಂಡು ಕೊಂಡು ಕನ್ನಡ ನಾಡಿಗೆ ಉಳಿಸಿ ಕೊಟ್ಟವರು. ರಾಜ್ಯದ ರಕ್ಷಣೆ, ಪ್ರಜೆಗಳ ಯೋಗಕ್ಷೇಮ ಎರಡಕ್ಕೂ ವಿಶೇಷ ಗಮನ ಕೊಟ್ಟವರು .ಬದಲಾವಣೆಯನ್ನು ನಂಬಿದ ಹಾಗೂ ಆಧುನಿಕ ವಿಚಾರಧಾರೆ ಹೊಂದಿದ್ದ ಇವರು ಇದಕ್ಕೆ ಸಾಕ್ಷಿಯಾಗಿ ಅವರು ತಾನು ತೀರಿಕೊಂಡಾಗ ತನ್ನ ರಾಣಿಯರು ಸಹಗಮನ ಮಾಡಬಾರದೆಂದು ಆಜ್ಞಾಪಿಸಿದ್ದರು. ಚಿಕ್ಕ ದೇವರಾಜ ಒಡೆಯರ್ ಅವರ ಆರೋಹಣವು ದಕ್ಷಿಣ ಭಾರತದ ಇತಿಹಾಸದಲ್ಲಿ ಒಂದು ಮಹತ್ವದ ತಿರುವು ನೀಡಿತು. ಒಂದೆಡೆ, ವಿಜಯನಗರ ಮತ್ತು ಬಿಜಾಪುರ ಸಾಮ್ರಾಜ್ಯಗಳು ತಮ್ಮ ಪ್ರದೇಶದ ಮೇಲೆ ಹಿಡಿತವನ್ನು ಕಳೆದುಕೊಳ್ಳುತ್ತಿದ್ದವು ಮತ್ತು ಇನ್ನೊಂದೆಡೆ ಮೈಸೂರು ಸ್ವತಂತ್ರವಾಗಿತ್ತು ಮತ್ತು ವಿಜಯನಗರದ ರಾಜಕೀಯ ಉತ್ತರಾಧಿಕಾರಿ ಎಂದೇ ಗುರುತಿಸಲ್ಪಟ್ಟಿತು.
The study of Ancient Indian coins is both interesting and fascinating. Coins help archaeologists and historians discover the history, culture, economy and religious importance of a bygone era.The coins posted here were issued by various kings belonging to different dynasties,in different times .
Tuesday
Mysore Kingdom ( ಮೈಸೂರು ಸಂಸ್ಥಾನ ) (1399 to 1947 AD )
Subscribe to:
Posts (Atom)